ಜನವರಿ 12ರಿಂದ ರಾಜ್ಯಾದ್ಯಂತ ‘ವಿವೇಕ್ ಬ್ಯಾಂಡ್-2016’ ಬೃಹತ್ ಯುವ ಅಭಿಯಾನ

 

ಬೆಂಗಳೂರು, ಜನವರಿ 3, 2016 : ಯುವಜನರಲ್ಲಿ ಸಾಮಾಜಿಕ ಸೇವಾ ಪ್ರಜ್ಞೆಯನ್ನು ಪೋಷಿಸುವ ‘ಉತ್ತಮನಾಗು-ಉಪಕಾರಿಯಾಗು’ ಎಂಬ ಸ್ವಾಮಿ ವಿವೇಕಾನಂದರ ಜೀವನ ಸಂದೇಶವನ್ನು ಸಾರುವ ಬೃಹತ್ ಯುವ ಅಭಿಯಾನ ‘ವಿವೇಕ್ ಬ್ಯಾಂಡ್-2016’ ಇದೇ ಬರುವ ಜನವರಿ 12 ರಿಂದ 26ರವರೆಗೆ ರಾಜ್ಯಾದ್ಯಂತ ನಡೆಯಲಿದೆ.

bands

ಜನವರಿ 12, 2016 ರಂದು ಸ್ವಾಮಿ ವಿವೇಕಾನಂದರ 153ನೇ ಜಯಂತಿ ಮತ್ತು ರಾಷ್ಟೀಯ ಯುವ ದಿನದ ಅಂಗವಾಗಿ ರಾಜ್ಯದಾದ್ಯಂತ ವಿವೇಕ್ ಬ್ಯಾಂಡ್ ಅಭಿಯಾನಕ್ಕೆ ಚಾಲನೆ ದೊರೆಯಲಿದೆ. ಯುವಕ- ಯುವತಿಯರು ತಮ್ಮ ಬಲಗೈಗೆ ವಿವೇಕ್‌ಬ್ಯಾಂಡ್‌ನ್ನು ಧರಿಸಲಿದ್ದು, ವಿವೇಕಾನಂದರು ಯುವಜನರಿಗೆ ನೀಡಿದ ‘ಉತ್ತಮನಾಗು-ಉಪಕಾರಿಯಾಗು’ ( BE GOOD – DO GOOD ) ಎಂಬ ಸಂದೇಶವನ್ನು ತಾವು ಪಾಲನೆ ಮಾಡುವ ಸಂಕಲ್ಪ ತೊಡಲಿದ್ದಾರೆ.

ವಿವೇಕ್ ಬ್ಯಾಂಡ್ ಕೈಯಲ್ಲಿ ಧರಿಸುವುದರೊಂದಿಗೆ ಆ ದಿನ ಆರಂಭವಾಗಲಿರುವ ಅಭಿಯಾನವು 26 ಜನವರಿ 2016 ರ ವರೆಗೆ 2 ವಾರ ನಡೆಯಲಿರುವ ಈ ಬೃಹತ್ ಯುವ ಅಭಿಯಾನದಲ್ಲಿ ಸುಮಾರು 12 ಲಕ್ಷ ಯುವಕ- ಯುವತಿಯರು ಭಾಗವಹಿಸಲಿದ್ದಾರೆ.

ಬೆಂಗಳೂರಿನ ಸಾಮಾಜಿಕ ಸಂಸ್ಥೆ ‘ಸಮರ್ಥ ಭಾರತ’ ಈ ಯುವ ಅಭಿಯಾನವನ್ನು ಆಯೋಜಿಸಿದೆ.

VIVEK BAND- College Students

ಕಾಲೇಜು ವಿದ್ಯಾರ್ಥಿಗಳು, ಯುವ ಉದ್ಯೋಗಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ತಮ್ಮ ವೈಯಕ್ತಿಕ ಜೀವನದಲ್ಲಿ ಉತ್ತಮಗುಣಸ್ವಭಾವಗಳನ್ನು ಮೈಗೂಡಿಸುವುದರ ಜತೆಗೆ ಸಾಮಾಜಿಕವಾಗಿ ಉಪಯೋಗವಾಗುವ ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದು ಈ ಅಭಿಯಾನದ ಉದ್ದೇಶ . ಹೆಚ್ಚಿನ ಯುವ ಜನತೆಯನ್ನು ಸ್ಪೂರ್ತಿದಾಯಕ ಕಾರ್ಯಗಳಿಗೆ ಪ್ರೇರೇಪಿಸಿ ಈ ಮೂಲಕ ಅನೇಕ ಇತರರಿಗೆ ಆದರ್ಶ ವ್ಯಕ್ತಿಗಳಾಗುವ ಮೂಲಕ “ಉತ್ತಮನಾಗು-ಉಪಕಾರಿಯಾಗು” ಎಂಬ ಪರಂಪರೆಯನ್ನು ನಿರ್ಮಿಸುವ ಆಶಯವನ್ನು ಈ ಅಭಿಯಾನ  ಹೊಂದಿದೆ.

ಈ ಸಂದೇಶವು ಹೆಚ್ಚಿನ ಯುವ ಜನತೆಗೆ ತಲುಪಲು ತಂತ್ರಜ್ಞಾನಾಧಾರಿತ ವೇದಿಕೆಗಳಾದ ಸಮರ್ಥ ಭಾರತ ವೆಬ್‌ಸೈಟ್, ಸಾಮಾಜಿಕ ಜಾಲತಾಣಗಳು , ವಾಟ್ಸಪ್, ಮತ್ತು ಎಸ್‌ಎಮ್‌ಎಸ್ ಗಳನ್ನು ಬಳಸುವ ಮೂಲಕ “ವಿವೇಕ್ ಬ್ಯಾಂಡ್” ಅಭಿಯಾನದ ಪ್ರಚಾರ ನಡೆಸಲಾಗುತ್ತಿದೆ. ಇದಲ್ಲದೇ ಈ ವೇದಿಕೆಗಳು ವಿವೇಕ್ ಬ್ಯಾಂಡ್ ಧರಿಸುವವರಿಗೆ ಸ್ಪೂರ್ತಿದಾಯಕ ಅನುಭವಗಳನ್ನು ಹಂಚಿಕೊಳ್ಳಲೂ ಲಭ್ಯವಿರುತ್ತದೆ.

ಅನೇಕ ಸಂಘ ಸಂಸ್ಥೆಗಳು, ವಿದ್ಯಾ ಸಂಸ್ಥೆಗಳು, ಸಾಂಸ್ಕೃತಿಕ ಸಂಘಗಳು,ಸಮಾಜದ ಅನೇಕ ಕ್ಷೇತ್ರಗಳಲ್ಲಿ ಹೆಸರಾಂತ ಗಣ್ಯರು ಈ ಅಭಿಯಾನಕ್ಕೆ ದನಿಗೂಡಿಸಿದ್ದಾರೆ .

ನಮ್ಮ ಅಭಿಯಾನದ ರಾಯಭಾರಿಗಳು :-

ಸ್ಮೃತಿ ಇರಾನಿ, ಕೇಂದ್ರ ಮಾನವ ಸಂಪನ್ಮೂಲ ಸಚಿವರು, ಭಾರತ ಸರಕಾರ

ಡಾ|| ಡಿ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು ಧರ್ಮಸ್ಥಳ ದೇವಸ್ಥಾನ

ಪೂಜ್ಯ ಶ್ರೀ ನಿರ್ಮಲನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ

ಡಾ|| ಅಣ್ಣಾದೊರೈ, ಇಸ್ರೋ ವಿಜ್ಞಾನಿಗಳು ಮತ್ತು ಮಂಗಳಯಾನ ಕಾರ್ಯಕ್ರಮದ ಮುಖ್ಯಸ್ಥರು

ನ್ಯಾ.ಮೂ. (ನಿವೃತ್ತ ) ಶಿವರಾಜ ಪಾಟೀಲ್, ಹೆಸರಾಂತ ಕಾನೂನು ತಜ್ಞರು

ಪದ್ಮಭೂಷಣ ಡಾ|| ದೇವಿ ಶೆಟ್ಟಿ, ಹೃದಯ ತಜ್ಞರು  ಮತ್ತು ಮುಖ್ಯಸ್ಥರು ನಾರಾಯಣ ಹೃದಯಾಲಯ ಸಂಸ್ಥೆ

ಶ್ರೀನಗರ ಕಿಟ್ಟಿ , ಕನ್ನಡ ಸಿನೆಮಾ ನಟರು

ಬಿ.ಸಿ. ಪಾಟೀಲ್, ಕನ್ನಡ ಸಿನೆಮಾ ನಟರು

ಮಮತಾ ಪೂಜಾರಿ, ಭಾರತೀಯ ಮಹಿಳಾ ಕಬ್ಬಡ್ಡಿ ತಂಡದ ನಾಯಕರು

ಪೂಜ್ಯ ಶ್ರೀ ಪ್ರಕಾಶಾನಂದ ಸ್ವಾಮೀಜಿ, ರಾಮಕೃಷ್ಣಾಶ್ರಮ

ಡಾ|| ಶರಣ್ ಪಾಟೀಲ್, ಮೂಳೆ ತಜ್ಞರು ಮತ್ತು ಮುಖ್ಯಸ್ಥರು ಸ್ಪರ್ಷ ಆಸ್ಪತ್ರೆಗಳ ಸಮೂಹ

ಚಕ್ರವರ್ತಿ ಸೂಲಿಬೆಲೆ, ಸಾಮಾಜಿಕ ಕಾರ್ಯಕರ್ತರು, ಅಂಕಣಕಾರ-ಭಾಷಣಕಾರರು

ಮಿಥುನ್ ಅಭಿಮನ್ಯು, ಕ್ರಿಕೆಟ್ ಆಟಗಾರರು

ಗುರುಕಿರಣ್, ಸಂಗೀತ ನಿರ್ದೇಶಕರು

ಡಾ|| ಸಿ.ಎಸ್. ರಾವ್, ಅಧ್ಯಕ್ಷರು ರಿಲಾಯನ್ಸ ಕಮ್ಮ್ಯುನಿಕೇಶನ್

ಅರ್ಜುನ್ ದೇವಯ್ಯ, ಏಶಿಯನ್ ಗೇಮ್ಸ ಸ್ವರ್ಣ ಪದಕ ವಿಜೇತರು

ರೂಪಿಕಾ, ಕನ್ನಡ ಅಭಿನೇತ್ರಿ

ಜನವರಿ 05, 2016  ರ ನಂತರ ರಾಜ್ಯದ ಅನೇಕ ಚಿಲ್ಲರೆ ಮಳಿಗೆಗಳಲ್ಲಿ ವಿವೇಕ ಬ್ಯಾಂಡ್ ಲಭ್ಯವಿರುತ್ತದೆ. ಎಲ್ಲಾ ಮಾರಾಟ ಮಳಿಗೆಗಳ ಸಮಗ್ರ ವಿವರಗಳು www.samarthabharata.org or www.vivekband.com   ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9880621824, 9663330692  (ಬೆಂಗಳೂರು) , 9611511228 (ಹುಬ್ಬಳ್ಳಿ), 9739953063 (ಮಂಗಳೂರು)  ಇಮೈಲ್ ವಿಳಾಸ: reachout.sb@gmail.com

Leave a Reply

Your email address will not be published. Required fields are marked *